ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಬಹುಭಾಷಾ ಕಲಾವಿದೆ. == ಬಹು ಭಾಷಾ ಕಲಾವಿದೆ == ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ. ಭಾರತಿಯವರ ಮಾತೃಭಾಷೆ ಮರಾಠಿ . ೧೯೬೬ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ 'ದುಡ್ಡೇ ದೊಡ್ಡಪ್ಪ' ಇವರ ಬಿಡುಗಡೆಗೊಂಡ ಮೊದಲ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಇವರ ಚಿತ್ರಗಳು ಯಶಸ್ಸು ಕಂಡಿವೆ. ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನ, ರಾಕೇಶ್ ರೋಶನ್, ಮೆಹಮೂದ್ ; ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಎನ್. ಟಿ. ಆರ್, ಕೃಷ್ಣ, ಶೋಬನ್ ಬಾಬು, ಕೃಷ್ಣಂ ರಾಜು, ಕಾಂತಾರಾವ್ ; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ ಗಣೀಶನ್, ಜೆಮಿನಿ ಗಣೀಶನ್, ಮುತ್ತುರಾಮನ್, ಜೈಶಂಕರ್, ರವಿಚಂದ್ರನ್, ಎ.ವಿ.ಎಮ್. ರಾಜನ್ ಮುಂತಾದ ನಟರೊಂದಿಗೆ ನಟಿಸಿದ್ದಾರೆ. ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಕ್ರೀಡಾಪಟುವೂ ಆಗಿದ್ದರು. == ಕನ್ನಡ ಚಿತ್ರರಂಗದಲ್ಲಿ == ಕನ್ನಡ ಚಿತ್ರರಂಗದಲ್ಲಿ 'ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ. == ವೈಯಕ್ತಿಕ ಜೀವನ == ನಟ ವಿಷ್ಣುವರ್ಧನ್ ಅವರನ್ನು ಮದುವೆಯಾದ ಭಾರತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. == ಪ್ರಶಸ್ತಿ. ಗೌರವಗಳು == ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ. == ಭಾರತಿ ಅಭಿನಯದ ಕೆಲವು ಚಿತ್ರಗಳು == ==== ಕನ್ನಡ ==== ==== ಹಿಂದಿ ==== ==== ತೆಲುಗು ==== ==== ತಮಿಳು ==== ==== ಮಲಯಾಳಂ ==== == ಉಲ್ಲೇಖಗಳು ==